8366 | 2SA 14:7 | ಈಗ ನೋಡು ಬಳಗದವರೆಲ್ಲರು ನಿನ್ನ ದಾಸಿಯಾದ ನನಗೆ ವಿರೋಧವಾಗಿ ಎದ್ದು ‘ತಮ್ಮನನ್ನು ಕೊಂದವನೆಲ್ಲಿ?, ಅವನನ್ನು ನಮಗೆ ಒಪ್ಪಿಸು. ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತೇವೆ’ ಅನ್ನುತ್ತಾರೆ. ಹೀಗೆ ಅವರು ನನಗುಳಿದಿರುವ ಒಂದು ಕೆಂಡವನ್ನೂ ಆರಿಸಿಬಿಟ್ಟು, ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಭೂಲೋಕದ ಮೇಲಿನಿಂದ ಅಳಿಸಬೇಕೆಂದಿದ್ದಾರೆ” ಎಂದು ಉತ್ತರ ಕೊಟ್ಟಳು. |
22608 | JON 1:8 | ಆಗ ಅವರು ಯೋನನಿಗೆ ಅಯ್ಯಾ, “ಈ ಕೇಡು ನಮಗೆ ಸಂಭವಿಸಲು ಕಾರಣವೇನು ಎಂಬುದನ್ನು ನೀನೇ ನಮಗೆ ತಿಳಿಸು; ನಿನ್ನ ವೃತ್ತಿ ಏನು? ನೀನು ಎಲ್ಲಿಂದ ಬಂದವನು? ನೀನು ಯಾವ ದೇಶದವನು?, ಯಾವ ಜನಾಂಗದವನು?” ಎಂದು ಅವನನ್ನು ಕೇಳಲು |
30035 | HEB 1:5 | ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, “ನೀನು ನನ್ನ ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” “ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು.” |